ಬೆಂಗಳೂರು,ಜ.05 (DaijiworldNews/HR): ಎಂಎಲ್ಸಿ ಆರ್ ಶಂಕರ್ ಅವರನ್ನು ಇಂದು ಮುಂಜಾನೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕರೆದು ಇನ್ನು ಎರಡು ಮೂರು ದಿನಗಳಲ್ಲಿ ನೀನು ಮಂತ್ರಿ ಆಗುತ್ತೀಯ ಎಂದು ಹೇಳಿದ್ದಾರೆ.
ಎಂಎಲ್ಸಿ ಶಂಕರ್ ಅವರು ಎಂದಿನಂತೆ ಗೃಹ ಕಚೇರಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬಂದಾಗ ಮುಖ್ಯಮಂತ್ರಿಗಳು ಸ್ವತಃ ಅವರೇ ನನ್ನನ್ನು ಕರೆದು ಬಾ ಕೂತ್ಕೋ, ತಿಂಡಿ ಮಾಡು ಎಂದು ಬಳಿಕ ಇನ್ನೆರಡು ಮೂರು ದಿನಗಳಲ್ಲಿ ನೀನು ಮಂತ್ರಿ ಆಗ್ತೀಯ ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಶಂಕರ್, "ಈಗ ವಾತಾವರಣ ತಿಳಿಯಾಗಿದೆ ನಾನು ಮಂತ್ರಿ ಆಗುವ ಭರವಸೆ ಇದೆ, ಇವತ್ತು ಸಂಜೆಗೇ ಮಂತ್ರಿ ಆದರೂ ಆಗಬಹುದು ಹೇಳಕ್ಕಾಗಲ್ಲ. ಸಿಎಂ ಯಾರು ಯಾರನ್ನು ಮಂತ್ರಿ ಮಾಡ್ತಾರೋ ನೋಡಬೇಕು" ಎಂದಿದ್ದಾರೆ.