ನವದೆಹಲಿ, ಜ. 05 (DaijiworldNews/MB) : ದೆಹಲಿ ಇಂಡಿಯಾ ಗೇಟ್ ಬಳಿ ಹೊಸ ಸಂಸತ್ ಸಂಕೀರ್ಣ ನಿರ್ಮಾಣ ಕಾರ್ಯಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ.
ಸೆಂಟ್ರಲ್ ವಿಸ್ಟಾ ಯೋಜನೆಗೆ ನೀಡಲಾದ ಪರಿಸರ ಅನುಮತಿ ಸೇರಿದಂತೆ ಹಲವಾರು ಅಂಶಗಳನ್ನು ಪ್ರಶ್ನಿಸಿ ಗುಂಪೊಂದು ಅರ್ಜಿ ಸಲ್ಲಿಸಿದ್ದು ಇದನ್ನು ಆಲಿಸುವ ಸಂದರ್ಭ ಸುಪ್ರೀಂಕೋರ್ಟ್ ದೆಹಲಿ ಇಂಡಿಯಾ ಗೇಟ್ ಬಳಿ ಹೊಸ ಸಂಸತ್ ಸಂಕೀರ್ಣ ನಿರ್ಮಾಣ ಕಾರ್ಯ ನಡೆಸಬಹುದು. ಅನುಮತಿಯಲ್ಲಿ ಯಾವುದೇ ದುರ್ಬಳಕೆ ನಡೆದಿಲ್ಲ. ಭೂ ಬಳಕೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ನಾವು ಭಾವಿಸುತ್ತೇವೆ ಎಂದುಮೂವರು ನ್ಯಾಯಾಧೀಶರನ್ನು ಒಳಗೊಂಡ ತ್ರಿ ಸದಸ್ಯ ಪೀಠವು ತಿಳಿಸಿದೆ.
ಇತ್ತೀಚೆಗೆ ನೂತನ ಸಂಸತ್ ಭವನದ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. ತೀರ್ಪು ಬರುವವರೆಗೂ ಯಾವುದೇ ನಿರ್ಮಾಣ ಕಾರ್ಯ ಆರಂಭ ಮಾಡುವುದಿಲ್ಲವೆಂದು ಸರ್ಕಾರ ಸುಪ್ರೀಂಕೋರ್ಟ್ಗೆ ಭರವಸೆಯನ್ನು ಕೂಡಾ ನೀಡಿತ್ತು.