ಕೋಲ್ಕತ್ತ, ಜ.05 (DaijiworldNews/HR): ಸಿನಿಮಾ ಚಿತ್ರೀಕರಣಕ್ಕಾಗಿ ಕೋಲ್ಕತ್ತಕ್ಕೆ ಆಗಮಿಸಿದ್ದ ಬ್ರಿಟಿಷ್ ನಟಿ ಬನಿತಾ ಸಂಧು ಅವರಿಗೆ ಸೋಮವಾರ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
ಕವಿತಾ ಮತ್ತು ತೆರೇಸಾ ಸಿನಿಮಾದ ಚಿತ್ರೀಕರಣಕ್ಕಾಗಿ ಬನಿತಾ ಸಂಧು ಡಿಸೆಂಬರ್ 20ರಂದು ನಗರಕ್ಕೆ ಆಗಮಿಸಿದ್ದರು ಮತ್ತು ಇಂಗ್ಲೆಂಡ್ನಿಂದ ಬರುವಾಗ ರೂಪಾಂತರ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದ್ದ ಯುವಕರೊಂದಿಗೇ ಅದೇ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂದ್ಉ ತಿಳಿದು ಬಂದಿದೆ.
ಇನ್ನು ಸೋಮವಾರ ಮಧ್ಯಾಹ್ನ ಸಂಧುಗೆ ಕೊರೊನಾ ತಗುಲಿರುವುದು ಪತ್ತೆಯಾಗಿದ್ದು, ರೂಪಾಂತರ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೂಪಾಂತರ ಕೊರೊನಾ ವೈರಸ್ ಸಂಧು ಅವರಿಗೆ ತಗುಲಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಲು ಅವರ ಮಾದರಿಗಳನ್ನು ಕಲ್ಯಾಣಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್ಗೆ ಕಳುಹಿಸಲಿದ್ದೇವೆ. ಫಲಿತಾಂಶ ಲಭ್ಯವಾದ ಬಳಿಕ ಅಗತ್ಯವಾದ ನಿಯಮವನ್ನು ಅನುಸರಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.