ಕಾಸರಗೋಡು, ಜ 04 (DaijiworldNews/SM): ಕೇರಳದಲ್ಲಿ ಹೊಸ ಸ್ವರೂಪದ ಕೊರೋನಾ ಸೋಂಕು ಪತ್ತೆಯಾಗಿದೆ. ಕೇರಳದಲ್ಲಿ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕೋಜಿಕ್ಕೊಡ್ ಒಂದೇ ಕುಟುಂಬದ ಇಬ್ಬರಲ್ಲಿ, ಕನ್ನುಣ್ಣೂರಿನಲ್ಲಿ ಓರ್ವನಲ್ಲಿ ಸೇರಿದಂತೆ ಕೇರಳದಲ್ಲಿ ಒಟ್ಟು ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬ್ರಿಟನ್, ಯುರೋಪ್ ನಿಂದ ಬಂದವರಿಂದ ಸೋಂಕು ಪತ್ತೆಯಾಗಿದೆ.
ಹೊಸ ಸ್ವರೂಪದ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೋಂಕಿತರ ಹಾಗೂ ಸೋಂಕಿತರ ಸಂಪರ್ಕದಲ್ಲಿರುವರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿದುಬಂದಿದೆ.