ಕೋಲ್ಕತ್ತ, ಜ.04 (DaijiworldNews/PY): "ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವರೇ ಹೊರಗಿನವರಾದರೆ, ಇನ್ನು ಯಾವ ಸ್ಥಳದವರನ್ನು ಒಳಗಿನವರು ಎಂದು ಹೇಳಲಾಗುತ್ತದೆ?" ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೇಳಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಭೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದ ಪ್ರಮುಖ ಭಾಗಗಳಲ್ಲಿ ಪಶ್ಚಿಮ ಬಂಗಾಳವು ಕೂಡಾ ಒಂದು. ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸಚಿವರು ಭೇಟಿ ನೀಡುವುದು ತಪ್ಪಾ?" ಎಂದು ಪ್ರಶ್ನಿಸಿದ್ದಾರೆ.
"ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಕ್ಕೆ ಹೊರಗಿನವರನ್ನು ಕರೆತರುತ್ತಿದೆ" ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು.