ಭೋಪಾಲ್, ಜ.04 (DaijiworldNews/PY): "ಈಗಲೇ ನಾನು ಕೊರೊನಾ ಲಸಿಕೆ ಪಡೆದುಕೊಳ್ಳುವುದಿಲ್ಲ. ಆದ್ಯತೆಯ ಗುಂಪುಗಳಿಗೆ ಕೊರೊನಾ ಲಸಿಕೆ ನೀಡಿದ ನಂತರ ಪಡೆದುಕೊಳ್ಳುತ್ತೇನೆ" ಎಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಕೊರೊನಾ ಲಸಿಕೆಗೆಗಾಗಿ ಮಧ್ಯಪ್ರದೇಶದ ಎಲ್ಲಾ ಜಿಲ್ಲೆಗಳು ತಯಾರಾಗಿವೆ. ಅಲ್ಲದೇ, ಅವಶ್ಯವಾದ ಸಿದ್ದತೆಗಳು ಕೂಡಾ ಆಗಿದೆ. ಆದ್ಯತೆಯ ಗುಂಪುಗಳಿಗೆ ಕೊರೊನಾ ಲಸಿಕೆ ನೀಡಿದ ನಂತರ ನಾನು ಲಸಿಕೆ ಸ್ವೀಕರಿಸುತ್ತೇನೆ" ಎಂದಿದ್ದಾರೆ.
ಭಾರತೀಯ ಔಷಧ ನಿಯಂತ್ರಕ ಸಂಸ್ಥೆಯು ರವಿವಾರ ಆಕ್ಸ್ಫರ್ಡ್ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ನ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಅನುಮೋದನೆ ನೀಡಿದೆ.