ಬೆಂಗಳೂರು, ಜ.04 (DaijiworldNews/HR): ಇಲ್ಲಿಯವರೆಗೂ ಒಂದು ರಾಜಕಾರಣ ಇನ್ನು ಮುಂದಿನ ದಿನಗಳಲ್ಲಿ ನಿಜವಾದ ರಾಜಕಾರಣ ಆರಂಭವಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಪಕ್ಷದ ಯುವ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, "ಜೆಡಿಎಸ್ ಪಕ್ಷದ ಬಗ್ಗೆ ಹಲವು ರೀತಿಯ ಚರ್ಚೆಗಳಾಗುತ್ತಿದ್ದು, ಯಾವುದೇ ಕಾರಣಕ್ಕೂ ಪಕ್ಷವನ್ನ ವಿಲೀನ ಮಾಡುವ ಸಂದರ್ಭ ಬರುವುದಿಲ್ಲ. ಯಾವ ಪಕ್ಷದ ಜೊತೆಗೂ ನಮ್ಮ ಪಕ್ಷವನ್ನ ವಿಲೀನ ಮಾಡುವುದಿಲ್ಲ" ಎಂದರು.
ಇನ್ನು "ನಮ್ಮ ಪಕ್ಷದ ಯಾವ ಕಾರ್ಯಕರ್ತರು ಕೂಡ ಉತ್ಸಾಹ ಕಳೆದುಕೊಳ್ಳಬೇಡಿ, ನಾವು ಎಂದಿಗೂ ನಿಮ್ಮೊಂದಿಗೆ ಇದ್ದೇವೆ. ತಳಮಟ್ಟದಲ್ಲಿ ಪಕ್ಷ ಸಾಕಷ್ಟು ಸದೃಢವಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯೇ ಇದಕ್ಕೆ ಸಾಕ್ಷಿ" ಎಂದು ಹೇಳಿದ್ದಾರೆ.