ಬೆಂಗಳೂರು, ಜ.04 (DaijiworldNews/HR): ಕೇಂದ್ರ ಶಿಸ್ತು ಸಮಿತಿ ಕೆಳಗೆ ಬಿ ಫಾರ್ಮ್ ಪಡೆದು ಗೆದ್ದವರು ಬರುತ್ತಾರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಕೇಂದ್ರದ ಶಿಸ್ತು ಸಮಿತಿಗೆ ಎಲ್ಲಾ ಮಾಹಿತಿ ನೀಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಶಾಸಕ ಬಸನಗೌಡ ಯತ್ನಾಳ್ ಶಾಸಕಾಂಗ ಪಕ್ಷ ಸಭೆ ಕರೆಯಲು ಹೇಳಿರುವುದಲ್ಲಿ ತಪ್ಪಿಲ್ಲ, ಸಚೇತಕ ಸುನೀಲ್ ಕುಮಾರ್ ಬರೆದಿದ್ದ ಪತ್ರ ಕೂಡಾ ಸರಿಯಾಗಿಯೇ ಇದೆ ಆ ಹಿನ್ನಲೆಯಲ್ಲಿ ಇಂದು ವಿಭಾಗವಾರು ಸಭೆ ಮಾಡಿದ್ದೇವೆ" ಎಂದರು.
ಇನ್ನು "ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಶಾಸಕರ ವಿಭಾಗವಾರು ಸಭೆಯಲ್ಲಿ ಕಳೆದ ಒಂದು ವರ್ಷದ ಅವಲೋಕನ ಮಾಡಿದ್ದು, ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರು ಉಲ್ಲೇಖ ಮಾಡಿದ್ದಾರೆ" ಎಂದು ಹೇಳಿದ್ದಾರೆ.