ಬೆಂಗಳೂರು, ಜ.04 (DaijiworldNews/HR): ಸಿಸಿಬಿ ಪೊಲೀಸರ ಬಲೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೊನೊಗ್ರಾಮ್ ಬಳಸಿ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಹನದ ಆರ್.ಸಿ. ಕಾರ್ಡ್ ಗಳನ್ನು ತಯಾರಿಸುತ್ತಿದ್ದ ಖದೀಮರ ಗುಂಪೊಂದು ಸಿಕ್ಕಿಬಿದ್ದಿದೆ.
ಕಾರ್ಯಚರಣೆಯ ವೇಳೆ ಸಿಸಿಬಿ ಪೊಲೀಸರು ಹತ್ತು ಮಂದಿ ವಂಚಕರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಮಲೇಶ್ ಕುಮಾರ್, ಎಸ್.ಲೋಕೇಶ್, ಸುದರ್ಶನ್, ನಿರ್ಮಲ್ ಕುಮಾರ್, ದರ್ಶನ್, ಶ್ರೀಧರ, ಚಂದ್ರಪ್ಪ, ಅಭಿಲಾಶ್, ತೇಜಸ್ ಹಾಗೂ ಮತ್ತಿತರು ಎಂದು ಗುರುತಿಸಲಗಿದೆ.
ಇನ್ನು ಸ್ಥಳದಲ್ಲಿದ್ದ ಸಾವಿರಾರು ನಕಲಿ ಕಾರ್ಡುಗಳು, ಲ್ಯಾಪ್ ಟಾಪ್ ಮತ್ತು ಪ್ರಿಂಟರ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.