ಶ್ರೀನಗರ, ಜ.04 (DaijiworldNews/HR): ಶ್ರೀನಗರದಲ್ಲಿ ಇಂದು ಕೂಡ ಹಿಮಪಾತ ಮುಂದುವರಿದಿದ್ದು, ಶ್ರೀನಗರದ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ, "ರನ್ವೇಯಿಂದ ಹಿಮವನ್ನು ತೆರವುಗೊಳಿಸಲಾಗಿದ್ದು, ವಾಯುಮಾರ್ಗವು ಸ್ಷಷ್ಟವಾಗಿ ಗೋಚರಿಸದ ಕಾರಣ ವಿಮಾನ ಹಾರಾಟ ಸೇವೆ ರದ್ದುಪಡಿಸಲಾಯಿತು" ಎಂದು ತಿಳಿಸಿದ್ದಾರೆ.
ಇನ್ನು ಹವಾಮಾನದಲ್ಲಿ ಸುಧಾರಣೆ ಕಂಡುಬಂದಲ್ಲಿ ವಿಮಾನಸೇವೆ ಮತ್ತೆ ಆರಂಭವಾಗಲಿದೆ. ಎಂದು ಹೇಳಿದರು. ಭಾನುವಾರವೂ ಹಿಮ, ಮಳೆಯಿಂದಾಗಿ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿತ್ತು.