ಸತಾರಾ, ಜ.04 (DaijiworldNews/PY): ಮಹಾರಾಷ್ಟ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ವಿಲಾಸ್ ಪಾಟೀಲ್ ಉಂಡಾಲ್ಕರ್ (82) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ವಿಲಾಸ್ ಅವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಲು ತಿಳಿಸಿವೆ.
ವಿಲಾಸ್ ಪಾಟೀಲ್ ಅವರು ಕಾಕಾ ಎಂದೇ ಪ್ರಸಿದ್ದರಾಗಿದ್ದು, ಇವರು 2014ರವರೆಗೆ ಕರಾಡ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, 2014ರಲ್ಲಿ ವಿಲಾಸ್ ಅವರಿಗೆ ಕಾಂಗ್ರೆಸ್ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭ ವಿಲಾಸ್ ಪಾಟೀಲ್ ಅವರು ಕಾನೂನು, ನ್ಯಾಯ ಹಾಗೂ ಸಹಕಾರಿ ಇಲಾಖೆಗಳ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ವಿಲಾಸ್ ಪಾಟೀಲ್ ಉಂಡಾಲ್ಕರ್ ಅವರ ಸ್ವಗ್ರಾಮ ಉಂಡಾಲೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.