ಲಕ್ನೊ, ಜ.04 (DaijiworldNews/PY): ಗಾಜಿಯಾಬಾದ್ ಜಿಲ್ಲೆಯ ಮುರಾದ್ನಗರದಲ್ಲಿ ರವಿವಾರ ಅಂತ್ಯಸಂಸ್ಕಾರಕ್ಕೆಂದು ಶವಾಗಾರಕ್ಕೆ ತೆರಳಿದ್ದವರ ಮೇಲೆ ಛಾವಣಿ ಕುಸಿದು ಬಿದ್ದ ಘಟನೆಗೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ.
ಘಟನೆಯಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ಘಾಜಿಯಾಬಾದ್ ಪೊಲೀಸರು, ನಗರಪಾಲಿಕೆಯ ಅಧಿಕಾರಿ ಸೇರಿದಂತೆ ಇಂಜಿನಿಯರ್ ಹಾಗೂ ಮೇಲ್ವಿಚಾರಕನ ಸಹಿತ ಮೂವರನ್ನು ಬಂಧಿಸಿದ್ದಾರೆ. ಆದರೆ, ಗುತ್ತಿಗೆದಾರ ಅಜಯ್ ತ್ಯಾಗಿ ಪರಾರಿಯಾಗಿದ್ದಾನೆ.
ಮುರಾದ್ ನಗರ ಪೊಲೀಸ್ ಠಾಣೆಯಲ್ಲಿ ಮೃತನ ಮಗನ ದೂರಿನ ಮೇರೆಗೆ ಅಜಯ್ ತ್ಯಾಗಿ, ನಿಹಾರಿಕಾ ಸಿಂಗ್, ಚಂದ್ರ ಪಾಲ್ ಹಾಗೂ ಆಶಿಸ್ ವಿರುದ್ಧ ಐಪಿಸಿ ಸೆಕ್ಷನ್ 304 ಸಹಿತ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.