ಕೋಲ್ಕತ್ತ,,ಜ.04 (DaijiworldNews/HR): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮಹಿಳಾ ನಾಯಕಿಯರು ಕಿಡಿಕಾರಿದ್ದಾರೆ.
ಕೈಲಾಶ್ ವಿಜಯವರ್ಗಿಯಾ ಅವರು "ಮಮತಾ ಬ್ಯಾನರ್ಜಿ ಅವರು ಹಳ್ಳಿಯೊಂದರಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಟ್ವೀಟ್ ಮಾಡಿ ‘ದೀದಿ (ಮಮತಾ) ತಾವು 5 ತಿಂಗಳ ಬಳಿಕ ಮಾಡಲಿರುವ ಕೆಲಸವನ್ನು ಈಗಲೇ ಆರಂಭಿಸಿದ್ದಾರೆ" ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಕಕೋಲಿ ಘೋಷ್ ದಸ್ತೀದಾರ್, "ಮಹಿಳೆಯರು ಅಡುಗೆ ಮನೆಯಲ್ಲಿಯೇ ಇರಬೇಕು ಎನ್ನುವ ಬಿಜೆಪಿಯ ಮಹಿಳಾ ವಿರೋಧಿ ಮನಸ್ಥಿತಿಯಿಂದ ದೇಶವು ತುಂಬಿದೆ. ನೀವು ಮಹಿಳೆಯಾಗಿದ್ದಾರೆ ಮತ್ತು ಸಕ್ರಿಯ ರಾಜಕೀಯದಲ್ಲಿ ಪಾಲ್ಗೊಳ್ಳಬೇಕು ಎಂಬ ಆಕಾಂಕ್ಷೆ ಹೊಂದಿದ್ದರೆ, ನನೆಪಿಡಿ– ಮಹಿಳೆಯರನ್ನು ಅಡುಗೆ ಮನೆಗೆ ವಾಪಸ್ ಕಳುಹಿಸುವ ಯೋಜನೆಯಲ್ಲಿರುವ ಬಿಜೆಪಿಯ ಇಂತಹ ಸ್ತ್ರೀ ವಿರೋಧಿ ಮನಸ್ಥಿತಿಯವರಿಂದ ದೇಶವು ತುಂಬಿಕೊಂಡಿದೆ" ಎಂದು ಹೇಳಿದ್ದಾರೆ.