ನವದೆಹಲಿ, ಜ.04 (DaijiworldNews/PY): "ದೆಹಲಿಯಲ್ಲಿ ಜ.4 ಹಾಗೂ 5ರಂದು ಮತ್ತಷ್ಟು ಮಳೆಯಾಗಲಿದೆ. ಉತ್ತರ ಭಾರತದಲ್ಲೂ ಕೂಡಾ ಶೀತದ ವಾತಾವರಣವಿದ್ದು, ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ" ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸೋಮವಾರದಂದು ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಹಾಗೂ ಗರಿಷ್ಠ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ರವಿವಾರ ಸಉರಿದ ಭಾರಿ ಮಳೆಯ ಕಾರಣ ಕನಿಷ್ಠ ತಾಪಮಾನ 9.9 ಡಿಗ್ರಿ ಇದ್ದರೆ, ಗರಿಷ್ಠ ತಾಪಮಾನ 18 ಡಿಗ್ರಿಯಷ್ಟಿತ್ತು.
"ದೆಹಲಿಯಲ್ಲಿ ಸಂಜೆ 5.30ರ ವೇಳೆಗೆ 14.8 ಮಿಮೀ ಮಳೆಯಾಗಿದೆ" ಎಂದು ಸಫ್ದರ್ಜಂಗ್ ವೀಕ್ಷಣಾಲಯದ ಅಂಕಿ-ಅಂಶ ತಿಳಿಸಿದೆ.
ಇನ್ನು 3-4 ದಿನಗಳ ತನಕ ಉತ್ತರ ಭಾರತದಲ್ಲಿ ಯಾವುದೇ ರೀತಿಯಾದ ಹೆಚ್ಚಿನ ಬದಲಾವಣೆಯಾಗಲು ಕಂಡುಬರುವುದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯನ್ನು ಹೊರತುಪಡಿಸಿ ಮೇಘಾಲಯ, ಸಿಕ್ಕಿಂ, ಬಿಹಾರ್, ತ್ರಿಪುರ, ಪಶ್ಚಿಮ ಬಂಗಾಳ, ಮಿಜೋರಾಂ, ಅಸ್ಸಾಂ ಹಾಗೈ ಜಾರ್ಖಂಡ್ನಲ್ಲಿಯೂ ಇನ್ನು ಎರಡು ದಿನಗಳ ಕಾಲ ಹಿಮ ಕವಿದ ವಾತಾವರಣವಿರಲಿದೆ ಎಂದು ಹೇಳಲಾಗಿದೆ.