ಕೌಶಂಬಿ, ಜ. 04 (DaijiworldNews/MB) : ಮಗಳ ಮೇಲೆ ಕೆಟ್ಟ ಕಣ್ಣು ಇರಿಸಿದ್ದ ಪತಿಯನ್ನು ಪತ್ನಿಯೇ ಹತ್ಯೆಗೈದ ಘಟನೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸೈನಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧೀಕ್ಷಕರಾದ ಅಭಿನಂದನ್, ''40 ವರ್ಷದ ಸುರೇಶ್ ಸಿಂಗ್ ಎಂಬಾತ ತನ್ನ ಮಗಳ ಮೇಲೆ ಕೆಟ್ಟ ಉದ್ದೇಶದಿಂದ ವರ್ತನೆ ಮಾಡುತ್ತಿದ್ದ ಎಂದು ಪತ್ನಿ ಸುನೀತಾ ಎಂಬಾಕೆ ಆಕೆಗೆ ಥಳಿಸಿ ಹತ್ಯೆಗೈದಿದ್ದಾಳೆ. ಪ್ರಸ್ತುತ ಮಹಿಳೆಯನ್ನು ಬಂಧಿಸಲಾಗಿದೆ'' ಎಂದು ತಿಳಿಸಿದ್ದಾರೆ.
''ಪತಿಗೆ ಪತ್ನಿಯು ಕೋಲಿನಿಂದ ಥಳಿಸಿದ್ದು ಗಂಭೀರ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ. ಮಹಿಳೆಯನ್ನು ಬಂಧನ ಮಾಡಿದ ಬಳಿಕ ಆಕೆ ಥಳಿಸಲು ಕಾರಣವೆನೆಂದು ತಿಳಿಸಿದ್ದಾಳೆ. ಪತಿಯು ಕುಡುಕನಾಗಿದ್ದು, ಮಗಳೊಂದಿಗೆ ಕೆಟ್ಟದಾಗಿ ವರ್ತನೆ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿಯ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಪತಿಯ ವಿರುದ್ದ ಆಕ್ರೋಶಗೊಂಡ ಆಕೆ ಕೋಲಿನಿಂದ ಥಳಿಸಿದ್ದು ಆತ ಸಾವನ್ನಪ್ಪಿದ್ದಾನೆ. ಪ್ರಸ್ತುತ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ'' ಎಂದು ತಿಳಿಸಿದ್ದಾರೆ.