ಹಿಮಾಚಲ ಪ್ರದೇಶ, ಜ.04 (DaijiworldNews/PY): ಹಿಮಾಚಲ ಪ್ರದೇಶದ ಕಿನ್ನೌರ್ ಹಾಗೂ ಕಾಜಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಕೊ ಸಮೀಪ ಜ.4 ಸೋಮವಾರದಂದು ಭೂಕುಸಿತವಾದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದ್ದು, ನೂರಾರು ಮಂದಿ ಸಿಲುಕಿದ್ದಾರೆ.
ಕಿನ್ನೌರ್ ಹಾಗೂ ಕಾಜಾ ರಸ್ತೆಯು ಲಾಹೌಲ್-ಸ್ಪಿತಿ ಜಿಲ್ಲೆಗೆ ಸಂಪರ್ಕ ಹೊಂದಿದೆ. ಆದರೆ ಈಗ ಭೂ ಕುಸಿತ ಹಾಗೂ ಹಿಮಪಾತ ಉಂಟಾದ ಕಾರಣ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.
ಇನ್ನು ಭೂಕುಸಿತ ಉಂಟಾದ ಪ್ರದೇಶದಲ್ಲಿನ ರಸ್ತೆಯಲ್ಲಿ ಹಲವು ವಾಹನಗಳು ಸಾಲುಗಟ್ಟಿ ನಿಂತಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಗಡಿ ರಸ್ತೆ ಸಂಘಟನೆಯ ಸಿಬ್ಬಂದಿಗಳು ಪ್ರಯತ್ನ ಮಾಡುತ್ತಿದ್ದಾರೆ.