ಶಿವಮೊಗ್ಗ, ಜ. 03 (DaijiworldNews/MB) : ''ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚಿಸಲು ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಾರು'' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಶ್ನಿಸಿದರು.
ಬಿಜೆಪಿ ವಿಶೇಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ'' ಎಂದರು.
''ಮಾಧ್ಯಮಗಳಲ್ಲಿ ಈಗ ಸಿಎಂಬ ಬದಲಾವಣೆ ವಿಚಾರವೇ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಈ ವಿಚಾರಗಳ ಬಗ್ಗೆ ಬೀದಯಲ್ಲಿ ಮಾತನಾಡಲು ಯತ್ನಾಳ್ ಯಾರು?'' ಎಂದು ಕೇಳಿದರು.
''ಎಲ್ಲರೂ ಅವರ ಮಿತಿಯಲ್ಲೇ ಕಾರ್ಯ ನಿರ್ವಹಿಸಬೇಕು. ಯಾವುದೇ ಅಸಮಾಧಾನವಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬೇಕು'' ಎಂದು ಹೇಳಿದರು.