ಬೆಂಗಳೂರು, ಜ. 03 (DaijiworldNews/MB) : ''ಲಸಿಕೆ ಪಡೆದರೆ ಜನ ಶಕ್ತಿಹೀನರಾಗುತ್ತಾರೆ ಎಂಬ ಎಲ್ಲಾ ವಾದವೂ ಅಸಂಬದ್ಧ'' ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ವಿ.ಜಿ ಸೋಮನಿ ಹೇಳಿದರು.
ಭಾರತೀಯ ಪ್ರಧಾನ ಔಷಧ ನಿಯಂತ್ರಕವು (ಡಿಸಿಜಿಐ) ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಲಸಿಕೆಗಳ ಅಣಕು ಕಾರ್ಯಾಚರಣೆಯೂ ನಡೆಯುತ್ತಿದೆ.
ಈ ನಡುವೆ ಲಸಿಕೆ ಪಡೆದರೆ ಜನ ಶಕ್ತಿಹೀನರಾಗುತ್ತಾರೆ ಎಂಬ ಸುದ್ದಿಗಳಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಸ್ವಲ್ಪ ಅಸುರಕ್ಷಿತ ಎಂದು ಆದರೆ ನಾನು ಅದಕ್ಕೆ ಒಪ್ಪಿಗೆ ನೀಡಲ್ಲ. ಲಸಿಕೆಗಳು ಶೇ. 110ರಷ್ಟು ಸುರಕ್ಷಿತ'' ಎಂದು ಹೇಳಿದರು.
ಇನ್ನು, ''ಯಾವುದೇ ಲಸಿಕೆ ಪಡೆದರೂ ಜನರಿಗೆ ಸಣ್ಣ ಜ್ವರ, ನೋವು, ಅಲರ್ಜಿ ಆಗುವುದು ಸಾಮಾನ್ಯ. ಆದರೆ ಲಸಿಕೆ ಪಡೆದ ಜನ ಶಕ್ತಿಹೀನರಾಗುತ್ತಾರೆ ಎಂಬುದು ಅಸಂಬದ್ಧವಾಗಿದೆ'' ಎಂದು ಹೇಳಿದರು.