ನವದೆಹಲಿ, ಜ.03 (DaijiworldNews/PY): ಭಾರತದಲ್ಲಿ ಆಸ್ಟ್ರಾಜೆನಕಾ ತುರ್ತು ಬಳಕೆಗೆ ಅನುಮತಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದು, "ಈ ಲಸಿಕೆ ಪಡೆಯಲು ಭಾರತೀಯರೇನು ಹಂದಿಗಳ?" ಎಂದು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ವಿಶ್ವ ಆರೋಗ್ಯ ಸಂಸ್ಥೆಯು ಆಕ್ಸ್ ಫರ್ಡ್-ಆಸ್ಟ್ರಾಜೆನಿಕಾ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡಿಲ್ಲ. ಹೀಗಿದ್ದರೂ ಕೂಡಾ ಈ ಲಸಿಕೆಯನ್ನು ಬಳಸಲು ಡಿಸಿಐಜಿ ಅನುಮತಿ ನೀಡಿದೆ. ಈ ಲಸಿಕೆ ಸ್ವೀಕರಿಸಲು ಭಾರತೀಯರೇನು ಹಂದಿಗಳಾ?" ಎಂದು ಕೇಳಿದ್ದಾರೆ.
ಇದೇ ಸಂದರ್ಭ ಭಾರತ್ ಬಯೋಟೆಕ್ನ ಲಸಿಕೆಯಾದ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ತಡವಾಗಿ ಅನುಮತಿ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.