ಭೋಪಾಲ್, ಜ.03 (DaijiworldNews/PY): ರವಿವಾರ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ನಿಷ್ಠರಾಗಿ ಇಬ್ಬರು ಶಾಸಕರಿಗೆ ಸ್ಥಾನ ಕಲ್ಪಿಸಿದ್ದಾರೆ.
ನೂತನ ಸಚಿವರಾದ ತುಳಸಿರಾಂ ಸಿಲಾವತ್ ಹಾಗೂ ಗೋವಿಂದ್ ರಾಜಪೂತ್ ಅವರಿಗೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಪ್ರಮಾಣವಚನ ಬೋಧಿಸಿದರು.
ಈ ಇಬ್ಬರು ಸೇರಿದ 15 ಮಂದಿ ಕಾಂಗ್ರೆಸ್ ಪಕ್ಷದಿಂದ ನಿರ್ಗಮಿಸಿದ್ದ ಕಾರಣ ಹಿಂದಿನ ಕಮಲಪಂತ್ ನೇತೃತ್ವದ ಸರ್ಕಾರವು ಪದಚ್ಯುತಿಗೊಂಡಿತ್ತು. 2020ರ ಮಾರ್ಚ್ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚೌಹಾಣ್ ಅವರು ಮೂರನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.
ಕಳೆದ ಎಪ್ರಿಲ್ನಲ್ಲಿ ನಡೆದಿದ್ದ ಸಂಪುಟ ವಿಸ್ತರಣೆ ಸಂದರ್ಭ ಸಿಲಾವತ್ ಹಾಗೂ ರಾಜಪೂತ್ ಅವರು ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಅವರು ಶಾಸನಸಭೆಯ ಸದಸ್ಯರಾಗಿಲ್ಲದ ಕಾರಣ ಅಕ್ಟೋಬರ್ನಲ್ಲಿ ರಾಜೀನಾಮೆ ನೀಡಿದ್ದರು.