ತಿರುವನಂತಪುರ, ಜ.03 (DaijiworldNews/PY): "ಇನ್ನೂ ಕೂಡಾ ಕೊವ್ಯಾಕ್ಸಿನ್ ಮೂರನೇ ಹಂತದಲ್ಲಿದೆ. ಈ ತೀರ್ಮಾನವು ಅಕಾಲಿಕವಾಗಿದ್ದು, ಅಪಾಯ ಎಂದೆನಿಸಿಕೊಳ್ಳಬಹುದು" ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊವ್ಯಾಕ್ಸಿನ್ ಇನ್ನೂ ಮೂರನೇ ಹಂತದಲ್ಲಿದೆ. ಈ ಅನುಮೋದನೆ ಅಕಾಲಿಕವಾದದ್ದು ಹಾಗೂ ಅಪಾಯಕಾರಿ" ಎಂದಿದ್ದಾರೆ.
"ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಈ ಬಗ್ಗೆ ಸ್ಪಷ್ಟಪಡಿಸಬೇಕು. ಪೂರ್ಣ ಪ್ರಯೋಗಗಳು ಮುಗಿಯುವವರೆಗೆ ಇದರ ಬಳಕೆಯನ್ನು ತಪ್ಪಿಸಬೇಕು. ಈ ಮಧ್ಯೆ ಅಸ್ಟ್ರಾಜೆನೆಕಾ ಲಸಿಕೆಯೊಂದಿಗೆ ದೇಶ ಮುಂದುವರಿಬಹುದು" ಎಂದು ತಿಳಿಸಿದ್ದಾರೆ.
ರವಿವಾರದ ಡಿಸಿಐಜಿಯು, ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರುತ್ತಬದ್ಧ ಲಸಿಕೆ ಬಳಕೆಗೆ ಅನುಮೋದನೆ ನೀಡಿತ್ತು.