ನವದೆಹಲಿ, ಜ.03 (DaijiworldNews/PY): "ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಪ್ರತಿಯೋರ್ವ ರೈತನೂ ಕೂಡಾ ಸತ್ಯಾಗ್ರಹಿಯಾಗಿದ್ದು, ಆತನಿಗೆ ಹಕ್ಕು ದೊರೆಯಲಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚಂಪಾರಣ್ ಸತ್ಯಾಗ್ರಹದಂತಹ ದುರಂತವನ್ನು ದೇಶ ಮತ್ತೊಮ್ಮೆ ಎದುರಿಸಲಿದೆ. ಆಗ ಬ್ರಿಟೀಷರು ಕಂಪೆನಿಗಳಿಗೆ ಬೆನ್ನೆಲುಬಾಗಿದ್ದರು. ಪ್ರಸ್ತುತ ಮೋದಿ ಹಾಗೂ ಗೆಳೆಯರು ಕಂಪೆನಿಯ ಬಹದ್ದೂರ್ಗಳಾಗಿದ್ದಾರೆ. ಆದರೆ, ಚಳುವಳಿಯ ಪ್ರತಿಯೊಬ್ಬ ರೈತನೂ ಕೂಡಾ ಸತ್ಯಾಗ್ರಹಿಯಾಗಿದ್ದು, ಆತನಿಗೆ ಹಕ್ಕು ದೊರೆಯಲಿದೆ' ಎಂದಿದ್ದಾರೆ.
1917ರಲ್ಲಿ ನಡೆದಿದ್ದ ಚಂಪಾರಣ್ ಸತ್ಯಾಗ್ರಹವು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ್ದಾಗಿತ್ತು, ಈ ಸತ್ಯಾಗ್ರಹದ ನೇತೃತ್ವವನ್ನು ಮಹಾತ್ಮಗಾಂಧಿ ಅವರು ವಹಿಸಿದ್ದರು. ಕೃಷಿಗೆ ಸಂಬಂಧಿಸಿದಂತ ಹೋರಾಟವು ಬಿಹಾರದ ಚಂಪಾರಣ್ನಲ್ಲಿ ಪ್ರಾರಂಭವಾಗಿತ್ತು.