ಅರುಣಾಚಲ ಪ್ರದೇಶ, ಜ.03 (DaijiworldNews/PY): "ಯಾವ ಶಕ್ತಿಯಿಂದಲೂ ಭಾರತೀಯ ಸೇನಾ ಯೋಧರ ಕರ್ತವ್ಯದಿಂದ ವಿಮುಖವಾಗಿಸಲು ಸಾಧ್ಯವಿಲ್ಲ" ಎಂದು ಭಾರತದ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
ಬಿಪಿನ್ ರಾವತ್ ಅವರು ಜ.2 ಶನಿವಾರ ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆ ಬಳಿ ಫಾರ್ವರ್ಡ್ ವಾಯುಪಡೆ ನೆಲೆಗಳಲ್ಲಿ ಭಾರತೀಯ ಮಿಲಿಟರಿಯ ತಯಾರಿಯನ್ನು ಪರಾಮರ್ಶೆ ನಡೆಸಿದರು.
ಶನಿವಾರ ರಾವತ್ ಅವರು ಕೆಲ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಈ ವೇಳೆ ಈ ಪ್ರದೇಶದ ಭದ್ರತಾ ಮ್ಯಾಟ್ರಿಕ್ಸ್ನ ಪ್ರಮುಖ ಅಂಶಗಳ ವಿಚಾರದ ಬಗ್ಗೆ ಹಿರಿಯ ಮಿಲಿಟರಿ ಕಮಾಂಡರ್ಗಳು ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
"ಗಡಿಗಳನ್ನು ಕಾಪಾಡುವಂತ ಕರ್ತವ್ಯದ ಎಲ್ಲೆಯನ್ನು ಮೀರಿ ಹೋಗುವ ಈ ರೀತಿಯಾದ ಸವಾಲಿನ ವೇಳೆ ಭಾರತೀಯ ಯೋಧರು ಮುಂಜಾಗ್ರತೆ ವಹಿಸಬೇಕು. ಕರ್ತವ್ಯಕ್ಕಾಗಿ ತಮ್ಮ ಕರೆಯನ್ನು ಅಚಲವಾಗಿರಿಸಲು ಯಾವುದಕ್ಕೂ ಕೂಡಾ ಭಾರತೀಯ ಸಶಸ್ತ್ರ ಪಡೆಗಳನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ" ಎಂದು ರಾವತ್ ತಿಳಿಸಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.