ಹೈದರಾಬಾದ್, ಜ.03 (DaijiworldNews/PY): "ಹಣದ ಆಸೆಗಾಗಿ ತಂದೆಯೇ ಮಾರಾಟ ಮಾಡಿದ್ದ ಒಂದು ತಿಂಗಳ ಗಂಡು ಮಗುವನ್ನು ರಕ್ಷಿಸಲಾಗಿದ್ದು, ಮಕ್ಕಳ ಇಲಾಖೆಗೆ ಒಪ್ಪಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಗುವನ್ನು ಮಾರಾಟ ಮಾಡಿರುವ ವಿಚಾರದ ಬಗ್ಗೆ ಮಗುವಿನ ತಾಯಿ ದೂರು ನೀಡಿದ್ದರು. ಇದು ನಡೆದ ಒಂದು ವಾರದ ನಂತರ ಮಗುವನ್ನು ರಕ್ಷಿಸಲಾಗಿದೆ. ದೂರಿನಲ್ಲಿ, ವ್ಯಕ್ತಿಯೋರ್ವರು ಹಣದ ಆಮಿಷವೊಡಿದ್ದರು ಎಂದು ಉಲ್ಲೇಖಿಸಲಾಗಿತ್ತು.
"ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿ, ಮಗುವನ್ನು ಪತ್ತೆ ಹಚ್ಚಲಾಗಿದೆ. ಮಗುವಿನ ಪೋಷಕರು ಫುಟ್ಪಾತ್ನಲ್ಲಿ ವಾಸಿಸುತ್ತಿದ್ದು, ಭಿಕ್ಷಾಟನೆ ನಡೆಸಿ ಜೀವನ ನಡೆಸುತ್ತಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಯ ವಶದಲ್ಲಿರಿಸಿ ಪೋಷಿಸಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.