ಗೋರಖ್ಪುರ, ಜ.03 (DaijiworldNews/PY): "ರಾಜ್ಯದಲ್ಲಿ ಜ.14ರಂದು ಆಚರಿಸಲಿರುವ ಮಕರ ಸಂಕ್ರಾತಿ ವೇಳೆಗೆ ಕೊರೊನಾ ಲಸಿಕೆ ಲಭ್ಯವಾಗುತ್ತದೆ" ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಮಾರ್ಚ್ 2020ರಲ್ಲಿ ಕೊರೊನಾ ವಿರುದ್ದ ಅಭಿಯಾನವನ್ನು ಆರಂಭ ಮಾಡಿದ್ದೇವೆ. ಈ ವರ್ಷದ ಪ್ರಾರಂಭದಲ್ಲಿ ಲಸಿಕೆಯ ಡ್ರೈರನ್ ನಡೆಯುತ್ತಿದೆ" ಎಂದಿದ್ದಾರೆ.
ರಾಷ್ಟ್ರೀಯ ಔಷಧ ನಿಯಂತ್ರಕದ ತಜ್ಞರ ಸಮಿತಿಯು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ದಿಪಡಿಸಿರುವ ಆಕ್ಸ್ ಫರ್ಡ್ ಕೊರೊನಾ ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ಒಪ್ಪಿಗೆ ನೀಡಿದ್ದು, ಲಸಿಕೆ ಕೆಲವೇ ದಿನಗಳಲ್ಲಿ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.