ಮಂಗಳೂರು, ಜ. 02 (DaijiworldNews/MB) : ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 37ಮಂದಿಗೆ ಹಾಗೂ ಉಡುಪಿಯಲ್ಲಿ 12 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಈವರೆಗೆ ಒಟ್ಟು 4,89,908 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 4,56,960 ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 32,948 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು ಈ ಪೈಕಿ ಕೇವಲ 367 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ.
19 ರೋಗಿಗಳನ್ನು ಶನಿವಾರ ಗುಣಮುಖರಾಗಿದ್ದು ಒಟ್ಟು 31,849 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 732 ಸೋಂಕಿತರು ಸಾವನ್ನಪ್ಪಿದ್ದಾರೆ.
ಮಾಸ್ಕ್ ನಿಮಯ ಉಲ್ಲಂಘನೆ ಮಾಡಿದವರಿಂದ ಇದುವರೆಗೆ ಜಿಲ್ಲಾಡಳಿತವು 20,49,128 ರೂ. ದಂಡ ವಸೂಲಿ ಮಾಡಿದೆ.
ಉಡುಪಿ
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇಲ್ಲಿಯವರೆಗೆ 288838 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 265753 ನೆಗೆಟಿವ್ ಆಗಿದೆ.
ಶನಿವಾರ 12 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 23,085 ಕ್ಕೆ ತಲುಪಿದೆ. ಈ ಪೈಕಿ 81 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಶನಿವಾರ 13 ರೋಗಿಗಳು ಗುಣಮುಖರಾಗಿದ್ದು ಈವರೆಗೆ ಸೋಂಕಿತರು 22,816 ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 188 ಕೊರೊನಾ ಸಾವು ಪ್ರಕರಣಗಳು ಸಂಭವಿಸಿದೆ.