ನವದೆಹಲಿ,ಜ.02 (DaijiworldNews/HR): ಭಾರತದಿಂದ ಬ್ರಿಟನ್ಗೆ ವಿಮಾನಯಾನ ಸೇವೆಯು ಜನವರಿ 8ರಿಂದ ವಿಮಾನಯಾನ ಸೇವೆ ಪುನರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಭಾರತ ಮತ್ತು ಬ್ರಿಟನ್ನಿಂದ ತಲಾ 15 ವಿಮಾನಗಳು ಸಂಚಾರ ಸೇವೆ ಆರಂಭಿಸಲಿದ್ದು, ಈ ವ್ಯವಸ್ಥೆ ಜನವರಿ 23ರವರೆಗೂ ಚಾಲ್ತಿಯಲ್ಲಿ ಇರಲಿದೆ, ಬಳಿಕ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ರೂಪಾಂತರ ಕೊರೊನಾ ವೈರಸ್ ಬ್ರಿಟನ್ನಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವಣ ವಿಮಾನಯಾನ ಸೇವೆಯನ್ನು ಭಾರತ ನಿಲ್ಲಿಸಿತ್ತು.