ನವದೆಹಲಿ,ಜ.02 (DaijiworldNews/HR): 2019ರ ಮುಸ್ಲಿಂ ಮಹಿಳಾ ಕಾಯ್ದೆ ಅಡಿಯಲ್ಲಿ ಮಾಡಿದ ಅಪರಾಧಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಯಾವುದೇ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2019ರ ಮುಸ್ಲಿಂ ಮಹಿಳಾ ಕಾಯ್ದೆ ಪ್ರಕಾರ 'ತ್ರಿವಳಿ ತಲಾಖ್' ಮೂಲಕ ತ್ವರಿತಗತಿಯಲ್ಲಿ ವಿಚ್ಛೇದನ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಮುಸ್ಲಿಂ ಸಮುದಾಯದ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡಿದರೆ, ಆತನಿಗೆ ನೀಡುತ್ತಿರುವ ಜೈಲು ಶಿಕ್ಷೆಯನ್ನು ಮೂರು ವರ್ಷಗಳ ವರೆಗೆ ವಿಸ್ತರಿಸಬಹುದು ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಹೇಳಿದೆ.
ಇನ್ನು ಈ ಎಲ್ಲ ಕಾರಣಗಳಿಂದ 2019ರ ಕಾಯ್ದೆಯಡಿ ಅಪರಾಧವೆಸಗಿದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆದರೆ, ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡುವ ಮುನ್ನ, ದೂರದಾರ ಮಹಿಳೆಯ ಅಭಿಪ್ರಾಯವನ್ನು ಕೇಳಬೇಕಿದೆ ಎಂದು ನ್ಯಾಯಮೂರ್ತಿ ಇಂದು ಮಹಲ್ಹೋತ್ರ ಮತ್ತು ಇಂದಿರಾ ಬ್ಯಾನರ್ಜಿಯವರನ್ನೊಳಗೊಂಡ ದ್ವಿಸದಸ್ಯ ಪೀಠ ಹೇಳಿದೆ ಎಂದು ತಿಳಿದು ಬಂದಿದೆ.