ನವದೆಹಲಿ, ಜ.02 (DaijiworldNews/PY): "ದೆಹಲಿ ಮಾತ್ರವಲ್ಲ, ದೇಶದಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು" ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಲಸಿಕೆ ನೀಡುವ ಪ್ರಕ್ರಿಯೆ ಅಣುಕು ಕಾರ್ಯಾಚರಣೆಗೆ ದೆಹಲಿಯಲ್ಲಿ ಸಿದ್ದತೆ ಪರಿಶೀಲಿಸಿ ನಂತರ ಮಾತನಾಡಿದ ಅವರು, "ದೆಹಲಿಗೆ ಮಾತ್ರವಲ್ಲ ಇಡೀ ದೇಶದ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ವಿತರಿಸಲಾಗುವುದು. ಜನರಿಗೆ ಕೊರೊನಾ ಲಸಿಕೆ ಉಚಿತವಾಗಿ ದೊರಕಲಿದೆ" ಎಂದಿದ್ದಾರೆ.
ಸದ್ಯ ದೆಹಲಿಯಲ್ಲಿ ಕೊರೊನಾಗೆ ಔಷಧಿ ಹಾಗೂ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆ.