ಚಿಕ್ಕಮಗಳೂರು,ಜ.02 (DaijiworldNews/HR) : "ಹತ್ತು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ನನಗೆ ಎಸಿ ಕೊಠಡಿಯ ಒಳಗೆ ಕೆಲಸ ಮಾಡುವುದು ಆರಾಮದಾಯಕವಲ್ಲ ಎಂದು ಅನಿಸಿದಾಗ ನನ್ನ ಭಾವನೆಯನ್ನು ಸಹೋದರರಾದ ಕಾಫೀ ಡೇ ಸಮೂಹದ ಮಾಲೀಕ ವಿ.ಜಿ.ಸಿದ್ಧಾರ್ಥ ಅವರು ನನಗೆ ರಾಜೀನಾಮೆ ನೀಡುವ ನೈತಿಕ ಧೈರ್ಯವನ್ನು ನೀಡಿದರು ಬಳಿಕ ನಾವಿಬ್ಬರು ಸೇರಿ ನನ್ನ ರಾಜೀನಾಮೆಯನ್ನು ನಿರ್ಧರಿಸಿದ್ದೇವು" ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ದಿವಂಗತ ಸಿದ್ಧಾರ್ಥ ಅವರ ಸ್ಮಾರಣಾರ್ಥ ಬಸ್ ನಿಲ್ದಾಣ ಅನಾವರಣಗೊಳಿಸಲು ಜಿಲ್ಲೆಯ ಮುಡಿಗರೆ ತಾಲೂಕಿನ ಕುಡುರೆಗುಂಡಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, " ನನ್ನ ರಾಜೀನಾಮೆ ವಿಷಯದ ಬಗ್ಗೆ ಸಿದ್ಧಾರ್ಥ್ ಅವರೊಂದಿಗೆ ಮೂರೂವರೆ ಗಂಟೆಗಳವರೆಗೆ ಚರ್ಚೆ ನಡೆಸಿದ್ದೇವೆ" ಎಂದರು.
"ನನಗೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮತ್ತು ಸಾಮಾನ್ಯ ಮನುಷ್ಯನಂತೆ ಬದುಕಲು ಆಸೆಯಾಗುತ್ತಿದ್ದು, ಆ ಭಾವನೆಯನ್ನು ಸಿದ್ಧಾರ್ಥ ಅವರೊಂದಿಗೆ ವ್ಯಕ್ತಪಡಿಸಿದೆ, ಆಗ ಅವರು ನನಗೆ ಕೆಲಸ ತೊರೆಯುವಂತೆ ಪ್ರೇರೇಪಿಸಿ , ಪ್ರೋತ್ಸಾಹಿಸಿ ಸಂಪೂರ್ಣ ಬೆಂಬಲವನ್ನು ನೀಡಿದ್ದರು".
ಇನ್ನು "ರಾಜೀನಾಮೆ ಪತ್ರವನ್ನು ಟೈಪ್ ಮಾಡಬೇಕಾದ ದಿನಾಂಕವನ್ನು ಕೂಡ ಇಬ್ಬರೂ ಒಟ್ಟಿಗೆ ನಿರ್ಧರಿಸಿದ್ದೆವು. ಹಾಗಾಗಿ ಸಿದ್ದಾರ್ಥ್ ಅವರು ಯಾವಾಗಲೂ ನನ್ನೊಂದಿಗೆ ಇದ್ದು, ನನಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ಹೇಳಿದ್ದಾರೆ.