ಹೊಸದಿಲ್ಲಿ, ಜ.02 (DaijiworldNews/HR): 2007ರಲ್ಲಿ ರಿಲಯನ್ಸ್ ಪೆಟ್ರೋಲಿಯಂನ ಷೇರುಗಳ ವಹಿವಾಟಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸೆಬಿಯು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಮುಖೇಶ್ ಅಂಬಾನಿಗೆ 40 ಕೋ. ರೂ. ದಂಡ ವಿಧಿಸಿದೆ ಎಂದು ತಿಳಿದು ಬಂದಿದೆ.
2007 ಮಾರ್ಚ್ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ರಿಲಯನ್ಸ್ ಪೆಟ್ರೋಲಿಯಂನ ಶೇ. 4.1ರಷ್ಟು ಷೇರುಗಳ ಮಾರಾಟ ಘೋಷಿಸಿತ್ತು.
ಇನ್ನು ಅದೇ ಸಮಯದಲ್ಲಿ ಕಂಪೆನಿಯ ಷೇರು ಬೆಲೆಗಳು ಕುಸಿದಾಗ ರಿಲಯನ್ಸ್ ಪೆಟ್ರೋಲಿಯಂನ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿತ್ತು. ಷೇರುಗಳ ಬೆಲೆಯ ಮೇಲೆ ಪರಿಣಾಮ ಬೀರುವಂತೆ ಖರೀದಿ ಮತ್ತು ಮಾರಾಟವನ್ನು ತಪ್ಪಾಗಿ ಮಾಡಲಾಗಿದೆ ಎಂದು ಸೆಬಿ ತನಿಖೆಯಲ್ಲಿ ಕಂಡುಹಿಡಿದಿದೆ ಎನ್ನಲಾಗಿದೆ.