ಮುಂಬೈ,ಜ.01 (DaijiworldNews/HR): ಶಿವಸೇನೆಯು ಔರಂಗಬಾದ್ ಹೆಸರನ್ನು ಸಂಭಾಜಿ ನಗರ ಎಂದು ಬದಲಿಸಬೇಕೆಂಬ ಪ್ರಸ್ತಾವನೆ ಹಾಕಿದ್ದು, ಅದನ್ನು ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ ಆಘಾಡಿ ಮೈತ್ರಿಕೂಟದ ಪಾಲುದಾರ ಪಕ್ಷ ಕಾಂಗ್ರೆಸ್ ವಿರೋಧಿಸಿದೆ.
ಔರಂಗಬಾದ್ ರಾಜ್ಯದ ಪ್ರವಾಸೋದ್ಯಮ ರಾಜಧಾನಿಯಾಗಿದ್ದು, ಈ ನಗರದ ಹೆಸರನ್ನು ಬದಲಿಸಬೇಕು ಎನ್ನುವುದನ್ನು ಶಿವಸೇನಾ ಅನೇಕ ದಿನಗಳಿಂದ ಬೇಡಿಕೆ ಇಟ್ಟಿತ್ತು, ಈಗ ಆ ಬೇಡಿಕೆಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ.
ಇನ್ನು ವಾರದ ಹಿಂದೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 7500 ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಬಂದ ಮೇಲೆ, ಕೈಗಾರಿಕಾ ಸಚಿವ ಸುಭಾಷ್ ದೇಸಾಯ್ ಅವರು, ಔರಂಗಬಾದ್ ಅನ್ನು 'ಸೂಪರ್ ಸಂಭಾಜಿ ನಗರ್' ಎಂದು ಟ್ವೀಟ್ ಮಾಡಿದ್ದರು. ಶಿವಸೇನೆಯ ಈ ನಡೆಯನ್ನು ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕಂದಾಯ ಸಚಿವ ಬಾಳಾಸಾಹೇಬ್ ಥೊರಾಟ್ ಅವರು ವಿರೋಧಿಸಿದ್ದರು ಎನ್ನಲಾಗಿದೆ.