ನವದೆಹಲಿ,ಜ.01 (DaijiworldNews/HR): ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ 1984ರಲ್ಲಿ ಪಾಕಿಸ್ತಾನ ಸೇನೆಯ ಚಟುವಟಿಕೆಗಳನ್ನು ಗುರುತಿಸಿದ್ದ ಖ್ಯಾತ ಪರ್ವತಾರೋಹಿ ನಿವೃತ್ತ ಕರ್ನಲ್ ನರೇಂದ್ರ ಬುಲ್ ಕುಮಾರ್ (87) ನಿಧನರಾಗಿದ್ದಾರೆ.
ನರೇಂದ್ರ ಕುಮಾರ್ ಅವರು, ಈಗಿನ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯಲ್ಲಿ 1933ರಲ್ಲಿ ಜನಿಸಿದ್ದು, 1984ರ ಏಪ್ರಿಲ್ನಲ್ಲಿ ಸಿಯಾಚಿನ್ ನೀರ್ಗಲ್ಲುವಿನಲ್ಲಿ ಭಾರತೀಯ ಸೇನೆಯನ್ನು ಮುನ್ನಡೆಸಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಬಯಕೆಯಂತೆ ಕಾಶ್ಮೀರದ ಸಿಯಾಚಿನ್ ನೀರ್ಗಲ್ಲು ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಆಪರೇಷನ್ ಮೇಘದೂತ್ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇದಕ್ಕೂ ಮುನ್ನ 1978ರಲ್ಲಿ ಅವರು ಜಗತ್ತಿನ ಮೂರನೇ ಅತಿ ಎತ್ತರದ ಪರ್ವತ ಕಾಂಚನಜುಂಗಾ ಅನ್ನು ಈಶಾನ್ಯ ಭಾಗದಿಂದ ಏರಿದ್ದರು.