ಉಡುಪಿ, ಜ.01 (DaijiworldNews/PY): ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಕರ್ನಾಟಕ ಸರಕಾರ ವೈ ಶ್ರೇಣಿ ಭದ್ರತೆ ಮಂಜೂರು ಮಾಡಿದ್ದು ಗುರುವಾರದಿಂದಲೇ ವೈ ಶ್ರೇಣಿ ಭದ್ರತೆ ಒದಗಿಸಲಾಗಿದೆ.
ರಾಮಮಂದಿರ ನಿರ್ಮಾಣ ಜನಜಾಗೃತಿ ಅಭಿಯಾನದಲ್ಲಿ ಸದ್ಯ ನಿರತರಾಗಿರುವ ಶ್ರೀಗಳು, ದೇಶಾದ್ಯಂತ ಸಂಚಾರ ಕೈಗೊಂಡಿದ್ದಾರೆ. ಈ ಹಿನ್ನೆಲೆ, ಅವರಿಗೆ ಸೂಕ್ತವಾದ ಭದ್ರತೆ ಒದಗಿಸುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಭಟ್ ಹಾಗೂ ರಾಜ್ಯ ಪೋಲೀಸ್ ಮಹಾನಿರ್ದೇಶಕರಿಗೆ ಪೇಜಾವರ ಮಠ ಕೃತಜ್ಞತೆ ಸಲ್ಲಿಸಿದೆ.