ಕೋಲ್ಕತ್ತ, ಜ.01 (DaijiworldNews/HR): ಜನ ಸಾಮಾನ್ಯರಿಗಾಗಿ ಹೋರಾಡುವುದಾಗಿ ಮತ್ತು ಆ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ತೃಣಮೂಲ ಕಾಂಗ್ರೆಸ್ 23ನೇ ಸಂಸ್ಥಾಪನಾ ದಿನಾಚರಣೆಯಂದು ಮಾತನಾಡಿರುವ ಅವರು,"1998 ಜನವರಿ 1ರಂದು ಪಕ್ಷವನ್ನು ಪ್ರಾರಂಭಿಸಿದ ಸಮಯವನ್ನು ನೆನಪಿಕೊಳ್ಳುತ್ತೇನೆ, ಅದು ಅಪಾರ ಹೋರಾಟದಿಂದ ಕೂಡಿತ್ತು. ಆದರೂ ಇಲ್ಲಿಯವರೆಗೂ ಜನರಿಗಾಗಿ ಬದ್ಧರಾಗಿರುವ ನಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ" ಎಂದರು.
ಇನ್ನು "ಪಶ್ಚಿಮ ಬಂಗಾಳದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆಯು ನಡೆಯಲಿದ್ದು, ಪಕ್ಷವು ದಶಕದ ಅಧಿಕಾರವನ್ನು ಪೂರ್ಣಗೊಳಿಸಲು ಸಜ್ಜಾಗುತ್ತಿದ್ದಂತೆಯೇ ರಾಜ್ಯವನ್ನು ಮತ್ತಷ್ಟು ಉತ್ತಮಗೊಳಿಸುವತ್ತ ತಮ್ಮ ಹೋರಾಟ ಮುಂದುವರಿತ್ತೇನೆ" ಎಂದು ಹೇಳಿದ್ದಾರೆ.