ನವದೆಹಲಿ, ಜ.01 (DaijiworldNews/PY): ವಿದೇಶ ಪ್ರವಾಸದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೊಸ ವರ್ಷದ ಶುಭಾಶಯ ತಿಳಿಸಿದ್ದು, "ನಾವು ಕಳೆದುಕೊಂಡವರನ್ನು ಹಾಗೂ ನಮಗಾಗಿ ತ್ಯಾಗ ಮಾಡಿದವರನ್ನು ನಾವು ನೆನಪಿಸಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅಸಮಾನತೆಯ ಶಕ್ತಿಗಳ ವಿರುದ್ದ ಹಾಗೂ ಗೌರವದಿಂದ ಹೋರಾಡುವ ರೈತರು ಹಾಗೂ ಕಾರ್ಮಿಕರೊಂದಿಗೆ ನನ್ನ ಹೃದಯವಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು" ಎಂದಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ದ ರೈರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎನ್ನುವುದನ್ನು ಪುನರುಚ್ಚರಿಸಿದ್ದಾರೆ.