ಹೈದರಾಬಾದ್,ಜ.01 (DaijiworldNews/HR): ಮೂತ್ರಪಿಂಡ ಸಂಬಂಧಿತ ಕಾಯಿಲೆಯೊಂದಿಗೆ ಬಳಲುತ್ತಿದ್ದ ತೆಲುಗಿನ ಖ್ಯಾತ ನಟ ನರ್ಸಿಂಗ್ ಯಾದವ್(52 ) ಅವರು ಗುರುವಾರದಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಯಾದವ್ ಅವರನ್ನು ಹೈದರಾಬಾದ್ನ ಸೋಮಾಜಿಗೂಡದಲ್ಲಿರುವ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ನರ್ಸಿಂಗ್ ಯಾದವ್ ಅನೇಕ ಸಿನಿಮಾಗಳಲ್ಲಿ ಹಾಸ್ಯ ಮತ್ತು ಖಳನಾಯಕ ಪಾತ್ರಗಳಲ್ಲಿ ಅಭಿನಯಿಸಿದ್ದು, ಅವರು ತೆಲುಗು ಮತ್ತು ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.
ಕೊನೆಯ ಬಾರಿಗೆ ನರ್ಸಿಂಗ್ ಯಾದವ್ ನಟ ಚಿರಂಜೀವಿ ಅಭಿನಯದ 150ನೇ ಚಿತ್ರ ಖೈದಿ ನಂಬರ್ 150 ಕಾಣಿಸಿಕೊಂಡಿದ್ದರು.