ಬೆಂಗಳೂರು, ಜ.01 (DaijiworldNews/PY): "ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು, ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜ.15ರ ತನಕ ಕಾಲಾವಕಾಶ ವಿಸ್ತರಿಸಿ ಅನುಮತಿ ನೀಡಿದೆ" ಎಂದು ಉನ್ನತ ಶಿಕ್ಷಣ ಸಚಿವರು ಆದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
"ಈ ಹಿನ್ನೆಲೆ ಇನ್ನೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೌನ್ಸೆಲಿಂಗ್ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ" ಎಂದಿದ್ದಾರೆ.
"ಇದರಿಂದಾಗಿ ಈಗಾಗಲೇ ಇಂಜಿನಿಯರಿಂಗ್ ಸೀಟು ಪಡೆದಿರುವವರಿಗೆ ಒಂದು ವೇಳೆ ಕೋರ್ಸ್ ಇಷ್ಟವಿಲ್ಲದಿದ್ದಲ್ಲಿ ಸೀಟುಗಳನ್ನು ವಾಪಾಸ್ಸು ಮಾಡಲು ಕೊನೆಯ ಬಾರಿಗೆ ಅವಕಾಶ ನೀಡಲಾಗುತ್ತಿದ್ದು, ಮುಂದೆ ನಡೆಯಲಿರುವ ಮಾಪ್-ಆಪ್ ಸುತ್ತಿನಲ್ಲಿ ಸೀಟು ಪಡೆದವರಿಗೆ ಅದನ್ನು ಹಿಂದಿರುಗಿಸಲು ಅವಕಾಶವಿರುವುದಿಲ್ಲ. ಅಲ್ಲದೇ, ಅವರಿ ನಿಗದಿತ ಶುಲ್ಕ ಪಾವತಿಸಿ ಪ್ರವೇಶ ಪಡೆಯಬೇಕಾಗುತ್ತದೆ. ಇಲ್ಲದಿದ್ದಲ್ಲಿ, ನಿಗದಿತ ಶುಲ್ಕದ ಐದು ಪಟ್ಟು ಮೊತ್ತವನ್ನು ದಂಡವಾಗಿ ಪಾವತಿ ಮಾಡಬೇಕಾಗುತ್ತದೆ" ಎಂದು ತಿಳಿಸಿದ್ದಾರೆ.