ಮಂಗಳೂರು, ಡಿ. 31(DaijiworldNews/SM): 2020 ವರ್ಷದ ಕೊನೆಯ ದಿನವಾದ ಇಂದು ನಿಷೇಧ ಆದೇಶದ ನಡುವೆ ಸಮುದ್ರಕ್ಕೆ ಈಜಾಡಲೆಂದು ಸಮುದ್ರಕ್ಕಿಳಿದ ನಾಲ್ಕು ಮಂದಿ ನೀರು ಪಾಲಾಗಿದ್ದು, ಓರ್ವ ಮೃತಪಟ್ಟ ಘಟನೆ ಮಂಗಳೂರಿನ ಹೊರ ವಲಯದ ಮೂಲ್ಕಿ ಚಿತ್ರಾಪುರ ಸಮೀಪದ ಕೆರೇಬಿಯನ್ ಬೀಚ್ ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಕಡಬ ನಿವಾಸಿ ಜಯರಾಮ್ ಎಂದು ಗುರುತಿಸಲಾಗಿದೆ. ಮೃತರು ಸಾಮಾಜಿಕ, ಧಾರ್ಮಿಕ ರಂಗದಲ್ಲಿ ಗುರುತಿಸಿಕೊಂಡಿದ್ದು, ಜೇಸಿಐ ಕಡಬ ಕದಂಬ ಘಟಕದ ಪೂರ್ವಾಧ್ಯಕ್ಷರಾಗಿದ್ದರು. ಇಂದು ಸಂಜೆ ಈಜಾಡಲೆಂದು ಗೆಳೆಯರೊಂದಿಗೆ ಸಮುದ್ರಕ್ಕಿಳಿದಿದ್ದಾಗ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಲ್ವರು ನೀರು ಪಾಲಾಗಿದ್ದರು.
ಘಟನೆ ನಡೆದ ಕೂಡಲೇ ಸ್ಥಳೀಯ ಮಂತ್ರ ಸರ್ಪ್ ಕ್ಲಬ್ ಸದಸ್ಯರು ಮೂವರನ್ನು ಪಾರು ಮಾಡಿದ್ದಾರೆ. ಆದರೆ ಜಯರಾಮ್ ಮಾತ್ರ ಮೃತಪಟ್ಟಿದ್ದಾರೆ.
ಮೂಲ್ಕಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.