ಮಂಗಳೂರು, ಡಿ. 31(DaijiworldNews/SM): ನಗರ ಪೊಲೀಸ್ ಕಮಿಷನರ್ ಆಗಿದ್ದ ವಿಕಾಸ್ ಕುಮಾರ್ ವಿಕಾಸ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಸ್ಥಾನಕ್ಕೆ ನೂತನ ಪೊಲೀಸ್ ಕಮಿಷನ್ ಆಗಿ ಶಶಿ ಕುಮಾರ್ ಅವರನ್ನು ಸರಕಾರ ನೇಮಕ ಮಾಡಲಾಗಿದೆ.
ಇನ್ನು ಈ ಹಿಂದೆ ಕಮಿಷನ್ ಆಗಿದ್ದ ವಿಕಾಸ್ ಕುಮಾರ್ ಅವರನ್ನು ಬೆಂಗಳೂರು ಮೀಸಲುಪಡೆಯ ಡಿಐಜಿಪಿಯನ್ನಾಗಿ ನೇಮಕ ಮಾಡಲಾಗಿದೆ. ಇನ್ನು ನೂತನ ಕಮಿಷನ್ ಶಶಿ ಕುಮಾರ್ ಅವರು ಈ ಹಿಂದೆ ಬೆಂಗಳೂರಿನಲ್ಲಿ ಎಸ್ಪಿಯಾಗಿದ್ದರು.