ಬೆಂಗಳೂರು,ಡಿ.31(DaijiworldNews/HR): "ಬ್ರಿಟನ್ನಿಂದ ಬಂದ 199 ಜನ ಪತ್ತೆಯಾಗದಿದ್ದು, ಅದರಲ್ಲಿ 80 ಜನ ಭಾರತದ ಪ್ರಜೆಗಳಲ್ಲ. ಹೀಗಾಗಿ, ಅವರ ಮಾಹಿತಿ ಇರಲಿಲ್ಲ ನಮ್ಮವರ 24 ಮಂದಿಯನ್ನ ಪತ್ತೆ ಹಚ್ಚಿದ್ದು, ಉಳಿದವರನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬ್ರಿಟನ್ನಿಂದ ಬಂದಿರುವ ಪ್ರಯಾಣಿಕರಲ್ಲಿ 30 ಜನರಿಗೆ ಆರ್ಟಿಪಿಸಿಆರ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿದ್ದು, ಅವರ ಸಂಬಂಧಿಕರಲ್ಲಿ ನಾಲ್ಕು ಜನರಿಗೆ ಪಾಸಿಟಿವ್ ಬಂದಿದ್ದು ಇದರಲ್ಲಿ 7 ಮಂದಿಗೆ ಕೊರೊನಾ ರೂಪಾಂತರ ವೈರಸ್ ಪತ್ತೆಯಾಗಿದೆ. ಹೊಸತಾಗಿ ಯಾರಿಗೂ ಬಂದಿಲ್ಲ, ಈ 34 ಜನರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ" ಎಂದರು.
ಇನ್ನು" ರಾತ್ರಿ ಕರ್ಪ್ಯೂ ಬಗ್ಗೆ ಗೊಂದಲವಿಲ್ಲ, ಅಶೋಕ್ ಅವರು ರಾತ್ರಿ ಕರ್ಪ್ಯೂ ವಿಧಿಸಿದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಜ್ಞರ ಸಮಿತಿಯೂ ಅದನ್ನೇ ಹೇಳಿತ್ತು. ಆದರೆ, ವಿರೋಧ ಪಕ್ಷದ ಮುಖಂಡರು ವಿರೋಧ ಮಾಡಿದರು. ಸಾರ್ವಜನಿಕರಿಗೂ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಖ್ಯಮಂತ್ರಿ ರದ್ದುಪಡಿಸಿದ ತೀರ್ಮಾನ ತೆಗೆದುಕೊಂಡರು" ಎಂದು ಹೇಳಿದ್ದಾರೆ.