ಬೆಂಗಳೂರು, ಡಿ.31 (DaijiworldNews/PY): ಚಿತ್ರನಟ, ಅನಿರುದ್ಧ ಜತ್ಕರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದು, "ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಮುಂದಾದ ಮಾದರಿಯ ರೀತಿಯಲ್ಲಿ ರಾಜ್ಯದಲ್ಲಿಯೂ ಕೂಡಾ ತೆರೆದ ಕಾಲುವೆಗಳನ್ನು ಮುಚ್ಚಬೇಕು" ಎಂದು ಕೋರಿದ್ದಾರೆ.
"ಗುಜರಾತ್ ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿದ್ದು, ಸೌರಫಲಕಗಳನ್ನು ಬಳಸಿ, ಎಡರೂ ಕಡೆಗಳಲ್ಲಿ ಕೂಡಾ ಗೋಡೆಗಳ ನಿರ್ಮಾಣ ಮಾಡಿ ವರ್ಟಿಕಲ್ ಗಾರ್ಡನಿಂಗ್ ಮಾಡಲಾಗಿದೆ. ಸದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಕೂಡಾ ತೆರೆದ ಕಾಲುವೆಗಳನ್ನು ಮುಚ್ಚಿ ವಿದ್ಯುತ್ ಉತ್ಪಾದನೆಗೆ ಸೌರಫಲಕಗಳನ್ನು ಬಳಕೆ ಮಾಡಬಹುದು ಹಾಗೂ ವರ್ಟಿಕಲ್ ಗಾರ್ಡನಿಂಗ್ ಮೂಡಾ ಮಾಡಬಹುದಾಗಿದೆ" ಎಂದು ತಿಳಿಸಿದ್ದಾರೆ.
"ತೆರೆದ ಕಾಲುವೆಗಳನ್ನು ಈ ರೀತಿಯಾಗಿ ಬಳಸಿಕೊಂಡರೆ ವಿದ್ಯುತ್ ಉತ್ಪಾದನೆ ಹಾಗೂ ಕೃಷಿ ಚಟುವಟಿಕೆಗಳಿಗೂ ಕೂಡಾ ನೆರವಾಗಲಿದೆ. ಗುಜರಾತ್ ಮಾದರಿಯನ್ನೊಮ್ಮೆ ಸರ್ಕಾರ ಅವಲೋಕಿಸಿ ನಮ್ಮ ರಾಜ್ಯದಲ್ಲೂ ಕೂಡಾ ಈ ವಿಚಾರದ ಬಗ್ಗೆ ಚಿಂತನೆ ನಡೆಸಬೇಕು" ಎಂದು ಮನವಿ ಮಾಡಿದ್ದಾರೆ.