ನವದೆಹಲಿ,ಡಿ.31(DaijiworldNews/HR): ಪಶ್ಚಿಮ ಬಂಗಾಳದ ಹಲವಡೆ ಗೋವುಗಳ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(ಸಿಬಿಐ) ಶೋಧ ನಡೆಸಿದೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕ ವಿನಯ್ ಮಿಶ್ರಾ ಅವರ ಮನೆಯಲ್ಲೂ ಸಿಬಿಐ ಶೋಧ ನಡೆಸಿದ್ದು, ವಿನಯ್ ಮಿಶ್ರಾ ಅವರಿಗೆ ದೇಶದಿಂದ ಹೊರ ಹೋಗದಂತೆ ಲುಕ್ಔಟ್ ನೋಟಿಸ್ ಕೂಡ ಜಾರಿ ಮಾಡಿದೆ ಎನ್ನಲಾಗಿದೆ.
ಇನ್ನು ಈಗಾಗಲೇ ಈ ಪ್ರಕರಣದಡಿ ಗೋವು ಕಳ್ಳ ಸಾಗಣೆಯ ಕಿಂಗ್ಪಿನ್ ಎನ್ನಲಾದ ಇಬ್ಬರು ವ್ಯಕ್ತಿಗಳು ಮತ್ತು ಬಿಎಸ್ಎಫ್ನ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.