ಮಂಗಳೂರು, ಡಿ. 31 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯ 220 ಗ್ರಾಮ ಪಂಚಾಯತ್ಗಳ 3222 ಸ್ಥಾನಗಳಿಗೆ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 1939 ಸ್ಥಾನಗಳಲ್ಲಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 1034 ಸ್ಥಾನಗಳಲ್ಲಿ, ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳು 132 ಸ್ಥಾನಗಳಲ್ಲಿ, ಜೆಡಿಎಸ್ ಬೆಂಬಲಿತ ಆರು ಅಭ್ಯರ್ಥಿಗಳು, ಸಿಪಿಐ ಬೆಂಬಲಿತ ಐದು ಅಭ್ಯರ್ಥಿಗಳು ಹಾಗೂ ಪಕ್ಷೇತರರು 106 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಜಿಲ್ಲೆಯಲ್ಲಿ 220 ಗ್ರಾಮ ಪಂಚಾಯತ್ಗಳ 3222 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7,275 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 91 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತ್ನ 631 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 481, ಕಾಂಗ್ರೆಸ್ ಬೆಂಬಲಿತ 126, ಎಸ್ಡಿಪಿಐ ಬೆಂಬಲಿತ 20 ಹಾಗೂ ಇತರೆ 4 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಚುನಾವಣೆ ಮುನ್ನ 7 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು 7 ಸ್ಥಾನವೂ ಬಿಜೆಪಿ ಬೆಂಬಲಿತ ಪಾಲಾಗಿದೆ. 1439 ಅಭ್ಯರ್ಥಿಗಳು ಕಣದಲ್ಲಿದ್ದರು. 2015 ರಲ್ಲಿ ಬೆಳ್ತಂಗಡಿಯ 46 ಗ್ರಾಮ ಪಂಚಾಯತ್ನ 631 ಸ್ಥಾನಗಳಲ್ಲಿ ಬಿಜೆಪಿ 331, ಕಾಂಗ್ರೆಸ್ 268, ಇತರೆ 29 ಸ್ಥಾನಗಳಲ್ಲಿ ಗೆದ್ದಿತ್ತು.
ಮೂಡುಬಿದಿರೆ ತಾಲೂಕಿನ 12 ಗ್ರಾಮ ಪಂಚಾಯತ್ನ 401 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 248, ಕಾಂಗ್ರೆಸ್ ಬೆಂಬಲಿತ 120, ಎಸ್ಡಿಪಿಐ ಬೆಂಬಲಿತ 10, ಸಿಪಿಐ ಬೆಂಬಲಿತ ಓರ್ವ ಅಭ್ಯರ್ಥಿ, ಇತರೆ 22 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. 7 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು ಬಿಜೆಪಿ ಬೆಂಬಲಿತ ಐವರು, ಕಾಂಗ್ರೆಸ್ ಬೆಂಬಲಿತ ಇಬ್ಬರು ಗೆದ್ದಿದ್ದಾರೆ. 419 ಅಭ್ಯರ್ಥಿಗಳು ಕಣದಲ್ಲಿದ್ದರು.
ಮಂಗಳೂರು ನಗರ ಉತ್ತರದಲ್ಲಿ 13 ಗ್ರಾಮ ಪಂಚಾಯತ್ಗಳ 251 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 251, ಕಾಂಗ್ರೆಸ್ ಬೆಂಬಲಿತ 82, ಎಸ್ಡಿಪಿಐ ಬೆಂಬಲಿತ 28, ಜೆಡಿಎಸ್ ಬೆಂಬಲಿತ ಆರು ಹಾಗೂ ಇತರೆ 8 ಅಭ್ಯರ್ಥಿಗಳು ಗೆಲುವು ಗಳಿಸಿದ್ದಾರೆ. 2015 ರ ಚುನಾವಣೆಯಲ್ಲಿ 251 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 120, ಕಾಂಗ್ರೆಸ್ ಬೆಂಬಲಿತ 123, ಇತರೆ 8 ಅಭ್ಯರ್ಥಿಗಳು ಗೆದ್ದಿದ್ದರು.
ಮಂಗಳೂರಿನ 19 ಗ್ರಾಮ ಪಂಚಾಯತ್ನ 332 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 92, ಕಾಂಗ್ರೆಸ್ ಬೆಂಬಲಿತ 188, ಎಸ್ಡಿಪಿಐ ಬೆಂಬಲಿತ 36 ಹಾಗೂ ಇತರೆ 16 ಅಭ್ಯರ್ಥಿಗಳು ಗೆಲುವು ಗಳಿಸಿದ್ದಾರೆ. 2015 ರ ಚುನಾವಣೆಯಲ್ಲಿ ಮಂಗಳೂರಿನ 19 ಗ್ರಾಮ ಪಂಚಾಯತ್ನ 332 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 103, ಕಾಂಗ್ರೆಸ್ ಬೆಂಬಲಿತ 209, ಇತರೆ 20 ಅಭ್ಯರ್ಥಿಗಳು ಗೆಲುವು ಗಳಿಸಿದ್ದರು.
ಬಂಟ್ವಾಳ ತಾಲೂಕಿನಲ್ಲಿ 39 ಗ್ರಾಮ ಪಂಚಾಯತ್ನಲ್ಲಿ 570 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 317, ಕಾಂಗ್ರೆಸ್ ಬೆಂಬಲಿತ 215, ಎಸ್ಡಿಪಿಐ ಬೆಂಬಲಿತ 25, ಜೆಡಿಎಸ್ ಬೆಂಬಲಿತ ನಾಲ್ವರು ಹಾಗೂ ಇತರೆ 9 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಒಟ್ಟು 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ 11 ಮಂದಿ ಬಿಜೆಪಿ ಬೆಂಬಲಿತರು, 3 ಮಂದಿ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. 1925 ಅಭ್ಯರ್ಥಿಗಳು ಕಣದಲ್ಲಿದ್ದರು. 2015 ರ ಚುನಾವಣೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 39 ಗ್ರಾಮ ಪಂಚಾಯತ್ನಲ್ಲಿ 570 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ 281, ಕಾಂಗ್ರೆಸ್ ಬೆಂಬಲಿತ 274, ಇತರೆ 15 ಅಭ್ಯರ್ಥಿಗಳು ಗೆದ್ದಿದ್ದರು.
ಪುತ್ತೂರು ತಾಲೂಕಿನಲ್ಲಿ 31 ಪಂಚಾಯತ್ನ 470 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 303, ಕಾಂಗ್ರೆಸ್ ಬೆಂಬಲಿತ 148, ಎಸ್ಡಿಪಿಐ ಬೆಂಬಲಿತ 8 ಮಂದಿ ಹಾಗೂ ಇತರೆ 11 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 21 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು 21 ಅಭ್ಯರ್ಥಿಗಳು ಕೂಡಾ ಬಿಜೆಪಿ ಬೆಂಬಲಿತರು. 704 ಅಭ್ಯರ್ಥಿಗಳು ಕಣದಲ್ಲಿದ್ದರು. 2015 ರ ಚುನಾವಣೆಯಲ್ಲಿ ಪುತ್ತೂರು ತಾಲೂಕಿನಲ್ಲಿ 31 ಪಂಚಾಯತ್ನ 470 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 279, ಕಾಂಗ್ರೆಸ್ ಬೆಂಬಲಿತ 187, ಇತರೆ ನಾಲ್ವರು ಅಭ್ಯರ್ಥಿಗಳು ಗೆದ್ದಿದ್ದರು.
ಸುಳ್ಯ-ಕಡಬ ತಾಲೂಕಿನ 46 ಗ್ರಾಮ ಪಂಚಾಯತ್ಗಳ 567 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 371, ಕಾಂಗ್ರೆಸ್ ಬೆಂಬಲಿತ 155, ಎಸ್ಡಿಪಿಐ ಬೆಂಬಲಿತ 5 ಮಂದಿ ಹಾಗೂ ಇತರೆ 36 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 2015ರಲ್ಲಿ 46 ಗ್ರಾಮ ಪಂಚಾಯತ್ನ 567 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 426, ಕಾಂಗ್ರೆಸ್ ಬೆಂಬಲಿತ 141 ಅಭ್ಯರ್ಥಿಗಳು ಗೆದ್ದಿದ್ದರು.