ತಿರುವನಂತಪುರ, ಡಿ.31 (DaijiworldNews/PY): ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ದ ಡಿ.31ರ ಗುರುವಾರ ವಿಧಾನಸಭೆ ಅಧಿವೇಶದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ನಿರ್ಣಯ ಮಂಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದೆ. ಒಂದು ವೇಳೆ ರೈತರ ಪ್ರತಿಭಟನೆ ಮುಂದುವರೆದಲ್ಲಿ ಇದರಿಂದಾಗಿ ಕೇರಳದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ" ಎಂದಿದ್ದಾರೆ.
"ದೇಶದಲ್ಲಿ ಕೇಂದ್ರ ಸರ್ಕಾರದ ಕಾನೂನಿನ ವಿರುದ್ದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಇತಿಹಾಸದಲ್ಲಿ ರೈತರು ತೆಗೆದುಕೊಂಡ ಮಹತ್ವವಾದ ತೀರ್ಮಾನವಾಗಿದೆ. ಕೇಂದ್ರದ ಈ ಕಾಯ್ದೆಗಳು ರೈತ ವಿರೋಧಿಯಾಗಿವೆ. ಅಲ್ಲದೇ ಕಾರ್ಪೋರೇಟರ್ ಸಂಸ್ಥೆಗಳ ಪರವಾಗಿದೆ" ಎಂದು ಪಿಣರಾಯಿ ಹೇಳಿದ್ದಾರೆ.
"ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಗುರುವಾರ ಒಂದು ಗಂಟೆಯ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಈ ವಿಶೇಷ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳ ವಿರುದ್ದ ನಿರ್ಣಯ ಮಂಡನೆ ಮಾಡಲಾಗಿದ್ದು, ಆದಷ್ಟು ಬೇಗ ಅವುಗಳನ್ನು ರದ್ದು ಮಾಡಬೇಕು" ಎಂದು ಒತ್ತಾಯಿಸಲಾಗಿದೆ.
"ಕೇಂದ್ರ ಸರ್ಕಾರದ ಕೆಲವು ಕಾನೂನು ನಮ್ಮ ಪ್ರಾಣಕ್ಕೆ ಹಾನಿಯುಂಟು ಮಾಡಬಹುದು ಎನ್ನುವ ಭಯ ಜನರಲ್ಲಿರುವಾಗ, ಆ ವಿಚಾರವಾಗಿ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುವುದು ಶಾಸಕಾಂಗ ಸಭೆಯ ನಾಯಕರ ಕರ್ತವ್ಯವಾಗಿದೆ" ಎಂದಿದ್ದಾರೆ.