ಚಂಡೀಗಢ, ಡಿ.31(DaijiworldNews/HR): ಕೃಷಿ ಮಸೂದೆಯ ವಿರೋಧದ ಬೆನ್ನಲ್ಲೇ ಹರಿಯಾಣದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಕೂಟಕ್ಕೆ ಭಾರೀ ಹಿನ್ನಡೆಯಾಗಿದೆ.
ಅಂಬಾಲಾ, ಪಂಚಕುಲ ಮತ್ತು ಸೋನಿಪತ್ ನಗರಗಳ ಮೇಯರ್ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಅದರ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.
ಇನ್ನು ಎರಡು ವರ್ಷಗಳ ಹಿಂದೆ ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟವು ಐದು ನಗರ ಸ್ಥಳೀಯ ಸಂಸ್ಥೆಗಳ ಮೇಯರ್ ಸ್ಥಾನವನ್ನು ಗೆದ್ದುಕೊಂಡಿತ್ತು, 2018 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮೈತ್ರಿ ಕೂಟ ಹಿಸಾರ್, ಕರ್ನಾಲ್, ಪಾಣಿಪತ್, ರೋಹ್ಟಕ್ ಮತ್ತು ಯಮುನಾನಗರಗಳಲ್ಲಿ ಜಯಗಳಿಸಿತ್ತು. ಆದರೆ, ಈ ವರ್ಷದ ನವೆಂಬರ್ನಲ್ಲಿ ಸೋನಿಪತ್ ವಿಧಾನಸಭೆ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆಯನ್ನು ಕಾಂಗ್ರೆಸ್ ಗೆದ್ದಿತ್ತು.
ಈ ಮೂರು ನಗರಗಳಲ್ಲಿನ ಎಲ್ಲಾ ವಾರ್ಡ್ಗಳ ಕೌನ್ಸಿಲರ್ಗಳ ಆಯ್ಕೆಗೂ ಚುನಾವಣೆ ನಡೆದಿದ್ದು, ಅಂಬಾಲಾ ನಗರಸಭೆಯ 20 ಸ್ಥಾನಗಳ ಪೈಕಿ ಬಿಜೆಪಿ 8, ಎಚ್ಜೆಸಿಪಿ 7, ಕಾಂಗ್ರೆಸ್ 3 ಮತ್ತು ಹರಿಯಾಣ ಡೆಮಾಕ್ರಟಿಕ್ ಫ್ರಂಟ್ 2 ಸ್ಥಾನಗಳನ್ನು ಗೆದ್ದಿದೆ. ಸೋನಿಪತ್ನಲ್ಲಿ ಬಿಜೆಪಿ 10 ವಾರ್ಡ್ಗಳಲ್ಲಿ, ಕಾಂಗ್ರೆಸ್ 9ರಲ್ಲಿ ಜಯಗಳಿಸಿವೆ. ಪಂಚಕುಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ 9 ಮತ್ತು 7 ಸ್ಥಾನಗಳಲ್ಲಿ ಜಯಗಳಿಸಿದೆ.