ಬೆಂಗಳೂರು, ಡಿ. 31 (DaijiworldNews/MB) : ಕರ್ನಾಟಕದಲ್ಲಿ ಒಂದು ದಿನದಲ್ಲಿ 973 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 1,217 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ರಾಜ್ಯದ ಆರೋಗ್ಯ ಬುಲೆಟಿನ್ ಬುಧವಾರ ತಿಳಿಸಿದೆ.
"ದಿನದಲ್ಲಿ 1,217 ಸೋಂಕಿತರು ಗುಣಮುಖರಾಗಿದ್ದು ಈವರೆಗೂ 8,94,834 ಮಂದಿ ಗುಣಮುಖರಾಗಿದ್ದಾರೆ. ಆದರೆ ಮಂಗಳವಾರ 973 ಹೊಸ ಪ್ರಕರಣಗಳು ದಾಖಲಾಗಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,18,544 ಕ್ಕೆ ಏರಿದೆ. ಈ ಪೈಕಿ 11,610 ಪ್ರಕರಣಗಳು ಸಕ್ರಿಯವಾಗಿದೆ" ಎಂದು ಬುಲೆಟಿನ್ನಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 7 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈವರೆಗೆ 12,081 ಕ್ಕೆ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
"ಇಲ್ಲಿಯವರೆಗೆ ಯುಕೆಯಿಂದ ಮರಳಿದ 1,965 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಪೈಕಿ 31 ಮಂದಿಗೆ ಪಾಸಿಟಿವ್ ಆಗಿದೆ. 1,680 ಮಂದಿಗೆ ನೆಗೆಟಿವ್ ಆಗಿದೆ. 248 ಮಂದಿಯ ವರದಿ ಇನ್ನಷ್ಟೇ ಬರಬೇಕಾಗಿದೆ" ಎಂದು ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದೆ.