ಮಂಗಳೂರು, ಡಿ. 31 (DaijiworldNews/MB) : ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31 ಮಂದಿಗೆ ಹಾಗೂ ಉಡುಪಿಯಲ್ಲಿ 11 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಈವರೆಗೆ ಒಟ್ಟು 4,65,201 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ 4,32,352 ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 32,849 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು ಈ ಪೈಕಿ ಕೇವಲ 365 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ.
39 ರೋಗಿಗಳನ್ನು ಬುಧವಾರ ಗುಣಮುಖರಾಗಿದ್ದು 31,752 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 732 ಸೋಂಕಿತರು ಸಾವನ್ನಪ್ಪಿದ್ದಾರೆ.
ಮಾಸ್ಕ್ ನಿಮಯ ಉಲ್ಲಂಘನೆ ಮಾಡಿದ 18,753 ಘಟನೆಗಳಲ್ಲಿ ಇದುವರೆಗೆ ಜಿಲ್ಲಾಡಳಿತವು 19,96,028 ರೂ. ದಂಡ ವಸೂಲಿ ಮಾಡಿದೆ.
ಉಡುಪಿ
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಇಲ್ಲಿಯವರೆಗೆ 2,84,110 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 2,61,071 ನೆಗೆಟಿವ್ ಆಗಿದೆ.
ಬುಧವಾರ 11 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 23,039 ಕ್ಕೆ ತಲುಪಿದೆ. ಈ ಪೈಕಿ 62 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಬುಧವಾರ 15 ರೋಗಿಗಳನ್ನು ಗುಣಮುಖರಾಗಿದ್ದು ಈವರೆಗೆ 188 ಸೋಂಕಿತರು ಸಾವುಗಳು ಮೃತಪಟ್ಟಿದ್ದಾರೆ.