ಮಂಗಳೂರು, ಡಿ.30 (DaijiworldNews/PY): "ನಗರದಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮಂಗಳೂರು ನಗರದಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುತ್ತದೆ" ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆದೇಶ ಹೊರಡಿಸಿದ್ದಾರೆ.
"ಡಿ.31ರ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಆದೇಶ ಜಾರಿಯಲ್ಲಿರುತ್ತದೆ" ಎಂದು ತಿಳಿಸಿದ್ದಾರೆ.
"ಹೊಸ ವರ್ಷಚರಣೆಯ ನೆಪದಲ್ಲಿ ಐದಕ್ಕಿಂದ ಹೆಚ್ಚು ಜನ ಸೇರುವುದು, ಸಾರ್ವಜನಿಕ ಸ್ಥಳ, ರಸ್ತೆ, ಬೀಚ್ ಹಾಗೂ ಮೈದಾನಗಳಲ್ಲಿ ಹೊಸ ವರ್ಷಾಚರಣೆ, ಜನ ಸೇರಿಸಿ ಹೊಸ ವರ್ಷಆಚರಣೆ ಮಾಡುವುದಕ್ಕೆ ಸಂಪೂರ್ಣ ನಿರ್ಭಂಧ ಹೇರಲಾಗಿದೆ" ಎಂದು ಹೇಳಿದ್ದಾರೆ.
"ವಸತಿ ಸಮುಚ್ಚಯ, ಖಾಸಗಿ ಕ್ಲಬ್ಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ಹೊಟೇಲ್, ಬಾರ್, ಪಬ್, ಮಾಲ್ಗಳಲ್ಲಿ ಡಿಜೆ, ಮ್ಯೂಸಿಕಲ್ ನೈಟ್ಗಳಿಗೆ ನಿಬಂಧ, ಇವುಗಳಲ್ಲಿ ಪ್ರತಿನಿತ್ಯದ ವ್ಯವಹಾರಕಷ್ಟೇ ಅನುಮತಿ" ಎಂದು ತಿಳಿಸಿದ್ದಾರೆ.
ಇನ್ನು, "ಹೆಚ್ಚು ಹೊತ್ತು ಜನರು ನಿಲ್ಲದಂತೆ ವ್ಯವಹಾರ ನಡೆಸಲು ಹೊಟೇಲ್, ಪಬ್ ಹಾಗೂ ಬಾರ್ಗಳಿಗೆ ಸೂಚನೆ ನೀಡಿದ್ದು, ಕಾನೂನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.