ಮಂಗಳೂರು, ಡಿ.30 (DaijiworldNews/PY): ಅಡ್ಡೂರು ಗ್ರಾಮದ ಕಾಂಗ್ರೆಸ್-ಎಸ್ಡಿಪಿಐ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿಯ ಘರ್ಷಣೆಯ ತಪ್ಪಿಸುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಘಟನೆ ನಗರದ ಬೊಂದೇಲ್ನ ಎಂಜಿಸಿ ಬಳಿ ನಡೆದಿದೆ.
ಈ ಸಂದರ್ಭ ಪೊಲೀಸ್ ಹಾಗೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.